Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, June 13, 2011

Pranava-Omkara(ಪ್ರಣವಃ-ಓಂಕಾರ)

ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ಹಿಂದಿನ  ಶ್ಲೋಕದಲ್ಲಿ ನಾವು ಸಂಕ್ಷಿಪ್ತವಾಗಿ ನೋಡಿದ ಓಂಕಾರದಬಗ್ಗೆ ಇನ್ನೂ ಹೆಚ್ಚಿನ ವಿವರವನ್ನೊಮ್ಮೆ ನೋಡೋಣ. ಹಿಂದೆ ಹೇಳಿದಂತೆ ಸಮಸ್ತ ವೇದದಲ್ಲಿ ನಾವು ಉಪಾಸನೆ ಮಾಡುವ  ಭಗವಂತನ ಎಲ್ಲಾ ಗುಣಗಳನ್ನು ಓಂಕಾರ ಹೇಳುತ್ತದೆ. ಓಂ(ॐ) ಎನ್ನುವುದಕ್ಕೆ ಒಂದು ಅಖಂಡ ಅರ್ಥವಿದೆ. ಓಂಕಾರ ಅವಅಥವಾ ಉಯಿಎನ್ನುವ ಎರಡು ಧಾತುವಿನಿಂದ ನಿಷ್ಪನ್ನವಾಯಿತು. ಅವತಿ ಇತಿ ಓಂ’-ಇಲ್ಲಿ ಅವತಿಪದಕ್ಕೆ ಅನೇಕ ಅರ್ಥವಿಶೇಷಗಳಿವೆ. ಅವ ವ್ಯಾಪ್ತೋಧಾತು; ಅವತಿ  ಎಂದರೆ ಎಲ್ಲ ಕಡೆ ತುಂಬಿರುವ. ಆದ್ದರಿಂದ ಓಂ ಎಂದರೆ ಸರ್ವಗತ(Omnipresent). ‘ಅವಎಂದರೆ ಜ್ಞಾನ. ಅವತಿಎಂದರೆ ಎಲ್ಲವನ್ನೂ ತಿಳಿದವನು; ಆದ್ದರಿಂದ ಓಂ ಎಂದರೆ ಸರ್ವಜ್ಞ(Omniscient). ‘ಅವ ಸಾಮರ್ಥ್ಯೇಎಂದು ಇನ್ನೊಂದು ಧಾತು; ಆದ್ದರಿಂದ ಅವತಿ ಎಂದರೆ ಸರ್ವಸಮರ್ಥ(Omnipotent). ಹೀಗೆ ದೇವರು ಸರ್ವಸಮರ್ಥ, ಸರ್ವಗತ, ಸರ್ವಜ್ಞ ಎನ್ನುವ ಪ್ರಮುಖ ಮೂರು ಮುಖವನ್ನು ಓಂಕಾರ ತಿಳಿಸುತ್ತದೆ. ಇದು ಭಗವಂತನನ್ನು ಗುರುತಿಸುವ ಮೂರು ಮೂಲಭೂತ ಗುಣಗಳು. ಜೀವ ಅಣುವಾದರೆ  ಭಗವಂತ ಸರ್ವಗತ; ಜೀವ ಅಲ್ಪಜ್ಞನಾದರೆ ಭಗವಂತ ಸರ್ವಜ್ಞ; ಜೀವ ಅಲ್ಪ ಸಾಮರ್ಥ್ಯ ಉಳ್ಳವನಾದರೆ ಭಗವಂತ ಸರ್ವಸಮರ್ಥ. ಹೀಗೆ ತನ್ನಿಂದ ಭಿನ್ನವಾಗಿರುವ ಆ ಶಕ್ತಿ ಎಷ್ಟು ಭಿನ್ನ ಎನ್ನುವುದನ್ನು ಓಂಕಾರ ತಿಳಿಸುತ್ತದೆ.
ಅವ ಪ್ರವೇಶೇಎನ್ನುವ ಧಾತು- ಇಲ್ಲಿ ಅವತಿ ಎಂದರೆ ಪ್ರವೇಶ ಮಾಡುತ್ತಾನೆಎಂದರ್ಥ. ಭಗವಂತ ಸರ್ವಗತ, ಆದ್ದರಿಂದ ಆತ ಎಲ್ಲರ ಒಳಗೂ(Indweller) ಹೊರಗೂ ಇದ್ದಾನೆ. ಇದನ್ನು ನಾರಾಯಣ ಸೂಕ್ತದಲ್ಲಿ ಅಂತರ್ ಬಹಿಶ್ಚ ತತ್ ಸರ್ವಂ ವ್ಯಾಪ್ಯ ನಾರಾಯಣ ಸ್ಥಿತಃಎಂದಿದ್ದಾರೆ. ಅವ ವದೇಅನ್ನುವ ಇನ್ನೊಂದು ಧಾತುವಿದೆ. ಅವತಿ ಎಂದರೆ ರಕ್ಷಣೆ ಮಾಡುವವ ಎನ್ನುವುದು ಒಂದು ಅರ್ಥ, ಸಂಹಾರ ಮಾಡುವವ ಎನ್ನುವುದು ಇನ್ನೊಂದು ಅರ್ಥ. ಆದ್ದರಿಂದ ಓಂ ಎಂದರೆ ಸರ್ವರಕ್ಷಕ, ಸರ್ವಸಂಹಾರಕ ಶಕ್ತಿ. ಭಗವಂತ ನಮ್ಮಲ್ಲಿರುವ ಅಜ್ಞಾನವನ್ನು, ನಮ್ಮಲ್ಲಿರುವ ದುಃಖವನ್ನು, ನಮ್ಮಲ್ಲಿರುವ ದೋಷವನ್ನು ಸಂಹಾರ ಮಾಡತಕ್ಕವ- ಸರ್ವ ದೋಷ ನಾಶಕಎನ್ನುವುದು ನಾವು ಓಂಕಾರದಲ್ಲಿ ಸಂಹಾರಕಶಕ್ತಿಭಗವಂತನನ್ನು ಉಪಾಸನೆ ಮಾಡುವಾಗ ತಿಳಿದಿರಬೇಕಾದ ವಿಚಾರ.
ಸಮಷ್ಟಿಯಾಗಿ ಅವಧಾತುವಿನಿಂದ ಹುಟ್ಟಿದ ಓಂ- ಭಗವಂತ ಸರ್ವ ಸಂಹಾರಕ, ಸರ್ವ ದೋಷನಿವಾರಕ, ಸರ್ವಾಂತರ್ಯಾಮಿ, ಸರ್ವಾಂತರ್ನಿಯಾಮಕ, ಸರ್ವಜ್ಞ, ಸರ್ವಸಮರ್ಥ, ಹೀಗೆ ನಾವು ಉಪಾಸನೆ ಮಾಡಬೇಕಾದ  ಭಗವಂತನ ಮುಖ್ಯ ಗುಣಗಳೆಲ್ಲವನ್ನು ಹೇಳುತ್ತದೆ. ಇದರ ವಿವರವೇ ಸಮಸ್ತ ವೇದದಲ್ಲಿ ಬರುವಂತದ್ದು.
ಎರಡನೇ ಧಾತು ಊಯತೇ ಇತೀ ಓಂ’. ಜಗತ್ತು ಯಾರಲ್ಲಿ ಓತವಾಗಿದೆಯೋ ಅವನು ಓಂ. ಅಂದರೆ ಇಡೀ ಜಗತ್ತು ಯಾರಲ್ಲಿ ಆಶ್ರಿತವಾಗಿದೆಯೋ ಅವನು ಓಂಕಾರವಾಚ್ಯ ಭಗವಂತ. ಎಲ್ಲ ಗುಣಗಳು ಯಾರಲ್ಲಿ ಓತವಾಗಿದೆಯೋ(ಹೆಣೆದುಕೊಂಡಿದೆಯೋ) ಅವನು ಓಂ. ಅಂದರೆ ಭಗವಂತ ಸರ್ವಾಧಾರ-ಸರ್ವಗುಣಪೂರ್ಣ.

ಓಂಕಾರವನ್ನು ಸಮಷ್ಟಿಯಾಗಿ ನೋಡಿದ ಮೇಲೆ ಅದನ್ನು ಬೇರೆ ಬೇರೆ ಅಕ್ಷರವಾಗಿ ವಿಂಗಡಿಸಿಕೊಂಡುಅದರಲ್ಲಿರುವ ಮೂರು ಅಕ್ಷರ(ಅ, , ಮ)ಏನನ್ನು ಹೇಳುತ್ತದೆ ಎನ್ನುವುದನ್ನು ನೋಡೋಣ. ಪ್ರಣವ ಪದದ ಒಂದೊಂದು ಅಕ್ಷರ ಓಂಕಾರದ ಒಂದೊಂದು ಅಕ್ಷರದ ವಿವರಣಾರೂಪದಲ್ಲಿದೆ. ಓಂಕಾರದ ಮೊದಲನೇ ಅಕ್ಷರ ’. ‘ಅಂದರೆ ಅಧಿಕ, ಎಲ್ಲಕ್ಕಿಂತ ಅಧಿಕನಾದ ಭಗವಂತ ’. ಇದನ್ನು ಪ್ರಣವದ ಪ್ರಅಕ್ಷರ ವಿವರಿಸುತ್ತದೆ. ಪ್ರಎಂದರೆ ಪ್ರಕೃಷ್ಟವಾದ- ಎಲ್ಲಕ್ಕಿಂತ ಪ್ರಕೃಷ್ಟವಾದ ಅನಂತ ಶಕ್ತಿ ಭಗವಂತ ’.  ಓಂಕಾರದ ಎರಡನೇ ಅಕ್ಷರ. ‘ಉ’ ಅಂದರೆ ಉತ್ತಮವಾದ ಜ್ಞಾನಾನಂದದಿಂದ ತುಂಬಿ ಉನ್ನತವಾದದ್ದು. ಇದನ್ನು ಪ್ರಾಣವದ ಅಕ್ಷರ ವಿವರಿಸುತ್ತದೆ. ‘ಣ’ ಎಂದರೆ   ಜ್ಞಾನಾನಂದದ ಆತ್ಮಬಲ. ಭಗವಂತ ಸರ್ವ ಸರ್ಮರ್ಥ- ಆದ್ದರಿಂದ ಜ್ಞಾನಾನಂದ ಸ್ವರೂಪ ಭಗವಂತ ’. ಓಂಕಾರದ ಮೂರನೇ  ಅಕ್ಷರ. ‘ಮ’ ಎಂದರೆ ಜ್ಞಾನಸ್ವರೂಪ. ಇದನ್ನು ಪ್ರಾಣವದ ಅಕ್ಷರ ವಿವರಿಸುತ್ತದೆ. ‘ವ’ ಎಂದರೆ ಜ್ಞಾನ-ಅದು ಸರ್ವಜ್ಞ ಎನ್ನುವ ಅರ್ಥವನ್ನು ಕೊಡುತ್ತದೆ. ಹೀಗೆ ಓಂಕಾರದ ಒಂದು ಮುಖವನ್ನು ಪ್ರಣವಃ’  ವಿವರಿಸುತ್ತದೆ.
 ಬೃಹದಾರಣ್ಯಕ ಉಪನಿಷತ್ತಿನಲ್ಲಿ ಹೇಳುವಂತೆ ನೇತಿ ನೇತಿ ಆತ್ಮಾ ಅಗ್ರಹ್ಯಃ ನ ಹಿ ಗ್ರಹ್ಯತೆ”-ಅಂದರೆ ಭಗವಂತನನ್ನು ಮೊದಲು ತಿಳಿಯುವುದೇನೆಂದರೆ ಭಗವಂತ ಪೂರ್ಣವಾಗಿ ತಿಳಿಯಲಿಕ್ಕಾಗುವ ವಸ್ತುವಲ್ಲಎಂದು!  ಅವನನ್ನು ಪೂರ್ಣವಾಗಿ ತಿಳಿಯುವುದು ಅಸಾಧ್ಯ ಎಂದು ತಿಳಿಯುವುದೇ ಮೊದಲು ನಾವು ಭಗವಂತನ ಬಗ್ಗೆ ತಿಳಿಯಬೇಕಾದ ವಿಷಯ. ಇದನ್ನು ಓಂಕಾರ ವಿವರಿಸುತ್ತದೆ. ಇಲ್ಲಿ '' ಎಂದರೆ ಅಲ್ಲ ಅಥವಾ ಇಲ್ಲ . ಭಗವಂತ ಅಲ್ಲ, ಭಗವಂತ ಇಲ್ಲ!  ಅಂದರೆ ಭಗವಂತ ಪೂರ್ಣವಾಗಿ ತಿಳಿಯಲು ಆಗುವ ಸಂಗತಿಯಲ್ಲ; ಏಕೆಂದರೆ  ನಾವು ತಿಳಿದಿರುವ ವಸ್ತುವಿನಲ್ಲಿ ಏನಿದೆಯೋ ಅದು ಅವನಲ್ಲಿಲ್ಲ. ನಮಗೆ ತ್ರಿಗುಣಾತ್ಮಕ ಪ್ರಪಂಚದ ಪರಿಚಯ ಮಾತ್ರ ಇದೆ, ಆದರೆ ಭಗವಂತ ತ್ರಿಗುಣಾತೀತ. ತ್ರಿಗುಣಾತ್ಮಕವಾದ ನಮ್ಮ ಮನಸ್ಸು ತ್ರಿಗುಣಾತೀತವನ್ನು ಗ್ರಹಿಸಲಾರದು. ಭಗವಂತನಲ್ಲಿ ಯಾವ ದೋಷವೂ ಇಲ್ಲ. ಆತ ಸರ್ವಗುಣಪೂರ್ಣ. ಭಗವಂತ ನಮ್ಮ ನಿಲುವಿನಿಂದ ಅತೀತ.
ಭಗವಂತ ’. ನಮ್ಮ ಮನಸ್ಸು ಏರಬಹುದಾದ ಎತ್ತರಕ್ಕಿಂತಲೂ ಉನ್ನತವಾಗಿರುವ ವಸ್ತು. ನಮ್ಮ ಮನಸ್ಸು ಆ ಎತ್ತರಕ್ಕೆ ಏರಲು ಸಾಧ್ಯವಿಲ್ಲ. ಆದರೂ ಆತ ’-ಅಂದರೆ ಆತನನ್ನು ತಿಳಿಯಬಹುದು! ಅಂದರೆ ಭಗವಂತ ಸಮುದ್ರದಂತೆ. ನಾವು ಪೂರ್ಣ ಸಮುದ್ರವನ್ನು ತಂದು ನಮ್ಮ ಮನೆಯ ಪಾತ್ರೆಯಲ್ಲಿ ತುಂಬಿಡಲು ಸಾಧ್ಯವಿಲ್ಲ. ಆದರೆ ನಮ್ಮ ಪಾತ್ರೆಯಲ್ಲಿ ಎಷ್ಟು ತುಂಬಬಹುದೋ ಅಷ್ಟು ನೀರನ್ನು ತುಂಬಿ ತರಬಹುದು. ಅದೇ ರೀತಿ ಭಗವಂತನನ್ನು ನಾವು ಪೂರ್ಣ ಗ್ರಹಿಸಲು ಅಸಾಧ್ಯ, ಆದರೆ ನಮ್ಮ ನಮ್ಮ ಸಾಮರ್ಥ್ಯಕ್ಕನುಗುಣವಾಗಿ ಆತನನ್ನು ತಿಳಿಯಬಹುದು. ಓಂಕಾರ ಭಗವಂತನನ್ನು ಪೂರ್ಣ ತಿಳಿಯಲು ಅಸಾಧ್ಯ, ಆದರೆ ನಿಮ್ಮ ನಿಮ್ಮ ಯೋಗ್ಯತೆಗೆ ತಕ್ಕಂತೆ ಭಗವಂತನನ್ನು ತಿಳಿಯಲು ಪ್ರಯತ್ನಿಸಿಎನ್ನುವ ವೇದದ ಸಂದೇಶವನ್ನು ನಮಗೆ ತಿಳಿಸುತ್ತದೆ.
ಭಗವಂತನನ್ನು ಯಾವ ರೀತಿ ಅನುಸಂಧಾನ ಮಾಡಬೇಕು ಎನ್ನುವುದನ್ನು ಓಂಕಾರ ತಿಳಿಸುತ್ತದೆ. ಭಗವಂತ ಅಂದರೆ ಆತ ಅತೀತ-ಯಾವುದು ಸೃಷ್ಟಿಯ ಪೂರ್ವದಲ್ಲಿ ಇತ್ತೋ ಅದು ’.  ನಾವು ಉತ್ಪನ್ನರಾದ ನಂತರ ಇರುವ ಭಗವಂತ ’; ಎಲ್ಲವೂ ನಾಶವಾದ ಮೇಲೆ ಇರುವ ಭಗವಂತ ’. ತ್ರಿಕಾಲದಲ್ಲಿ ಏಕರೂಪವಾಗಿರುವ ಭಗವಂತ ಓಂ.
ಭಗವಂತ ಅಂದರೆ ಭೂಃ (ಭೂಮಿ); ಆತ ’ –ಭೂಮಿಯ ಉಪರಿಯಲ್ಲಿರುವ ಅಂತರಿಕ್ಷ(ಭುವಃ); ಆತ ಅಂದರೆ ಜ್ಞಾನಪ್ರದವಾದ ಸ್ವರ್ಗ(ಸ್ವಃ). ಮೂರು ಲೋಕವನ್ನು ನಿಯಮಿಸುವ ಶಕ್ತಿ ಭಗವಂತ ಓಂ.
ನಮ್ಮ ಮೂರು ಅವಸ್ಥೆಗಳಾದ ’-ಎಚ್ಚರ, ‘’-ಕನಸು; ‘’-ನಿದ್ದೆಯನ್ನು ನಿಯಂತ್ರಿಸುವ  ಅನಂತ ಶಕ್ತಿ  ಭಗವಂತ ಓಂ.
ಹೀಗೆ ಸಮಸ್ತ ವೈದಿಕ ವಾಙ್ಮಯ ಯಾವ ಗುಣವನ್ನು ಭಗವಂತನಲ್ಲಿ ಉಪಾಸನೆ ಮಾಡಬೇಕೆಂದು ಹೇಳುತ್ತದೋ; ಸರ್ವನಾಮ ವಾಚ್ಯನಾದ ಭಗವಂತನಲ್ಲಿ ಸರ್ವ ನಾಮಗಳು ಯಾವ ಗುಣವನ್ನು ಹೇಳುತ್ತವೋ- ಅವೆಲ್ಲವನ್ನೂ ಸಂಗ್ರಹ ಮಾಡಿ ಭಟ್ಟಿ ಇಳಿಸಿ ಸಾರಯುಕ್ತವಾಗಿ ಹೇಳತಕ್ಕಂತಹ ಬೀಜಾಕ್ಷರ ಓಂಕಾರ. ಇದು ಭಗವಂತನ ಸ್ತೋತ್ರದಲ್ಲೇ ಅತ್ಯಂತ ಶ್ರೇಷ್ಠವಾದ ಸ್ತುತಿ. ಭಗವಂತನನ್ನಲ್ಲದೆ ಇನ್ಯಾರನ್ನೂ ‘ಓಂ’ ಎಂದು ಕರೆಯಲು ಅಸಾಧ್ಯ. ಈಕಾರಣಕ್ಕಾಗಿ ಸಾಮಾನ್ಯವಾಗಿ 'ಓಂ' ನ್ನು ಯಾರೂ ತಮ್ಮ ಹೆಸರಾಗಿ ಬಳಸುವುದಿಲ್ಲ, ಬಳಸಬಾರದು.

ಓಂಕಾರ ಜಪ ಅತ್ಯಂತ ಪರಿಣಾಮಕಾರಿ. ಸಾಮಾನ್ಯವಾಗಿ ಓಂಕಾರ ಜಪವನ್ನು  ಸನ್ಯಾಸಿಗಳು ಮಾಡುತ್ತಾರೆ. ಗ್ರಹಸ್ಥ ನಿರಂತರ ಓಂಕಾರ ಜಪ ಮಾಡುವುದು ಅಷ್ಟು ಸೂಕ್ತವಲ್ಲ, ಗರಿಷ್ಠ ಹತ್ತುಬಾರಿ. ಸಂಸಾರ ಜೀವನ ನಡೆಸುವ ಹೆಂಗಸರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಹೆಚ್ಚಾಗಿರುವುದರಿಂದ ಓಂಕಾರ ಜಪ ಮಾಡದಿರುವುದು ಒಳ್ಳೆಯದು. ಏಕೆಂದರೆ ಓಂಕಾರವನ್ನು ಪೂರ್ಣ ತೊಡಗಿಸಿಕೊಂಡು, ಅರ್ಥಾನುಸಂಧಾನದಿಂದ ಜಪ  ಮಾಡುವುದರಿಂದ ಅದು ಮನಸ್ಸಿನ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತದೆ. ಇದು ಒಂದು ರೀತಿಯ ಧ್ಯಾನವಿದ್ದಂತೆ. ಇದರಿಂದ ಮನಸ್ಸು ಮಗ್ನವಾಗಿ, ಸಂಸಾರಿಕ ಜೀವನದಲ್ಲಿ ವೈರಾಗ್ಯ ಬರುವ ಅಪಾಯವಿದೆ. ಆದರೆ ಸನ್ಯಾಸಿಗೆ ಈ ರೀತಿಯ ಯಾವ ಸಮಸ್ಯೆ ಇಲ್ಲ. ಆತ ತನ್ನ  ದೇಹ ತಡೆದುಕೊಳ್ಳುವಷ್ಟು(೧೨,೦೦೦) ಬಾರಿ ಓಂಕಾರ ಜಪ ಮಾಡಬಹುದು.
 

(೧೭೩)

No comments:

Post a Comment